ಭಾನುವಾರ, ಆಗಸ್ಟ್ 12, 2012

ಅವಸಾನದ ಅಂಚಿನಲ್ಲಿ ಶ್ರೀ ರಂಗಪಟ್ಟಣದ ರಾಕೆಟ್ ಕೋರ್ಟು ....!!

ಶ್ರೀ ರಂಗ ಪಟ್ಟಣದ  ರಾಕೇಟು ಗಳ ಚಿತ್ರಣ [ ಚಿತ್ರ ಕೃಪೆ ವಿಕಿಪಿಡಿಯಾ ]
ಶ್ರೀ ರಂಗ ಪಟ್ಟಣದ ರಾಕೆಟ್ ಕೋರ್ಟ್ 
ಶ್ರೀರಂಗಪಟ್ಟಣದ ಇತಿಹಾಸ ಗಮನಿಸಿದರೆ  ವಿಜ್ಞಾನದ  ಇತಿಹಾಸವೂ ಅನಾವರಣ ಗೊಳ್ಳುತ್ತದೆ.  ಅಂದಿನ ದಿನದ ಯುದ್ದಗಳಲ್ಲಿ  ಶ್ರೀರಂಗಪಟ್ಟಣದ ಸೈನಿಕರು  ವೈರಿಗಳ ವಿರುದ್ಧ  ರಾಕೆಟ್ ಬಳಸಿ  ಯುದ್ಧ  ಮಾಡಿ ಸೋಲಿಸಿ  ಹೊಸ ಕ್ರಾಂತಿ ಮಾಡಿದ್ದರು.ಮೈಸೂರಿನ ಇತಿಹಾಸದಲ್ಲಿ  ಅಥವಾ ಭಾರತ ಇತಿಹಾಸದಲ್ಲಿ ಯುದ್ದಗಳಲ್ಲಿ ರಾಕೆಟ್ ತಂತ್ರಜ್ಞಾನ ಬಳಸಿ ಕೊಂದ ಕೀರ್ತಿ ಹೈದರಾಲಿ ಗೆ ಸಲ್ಲುತ್ತದೆ. ಹೌದು ಅವನ ಕಾಲದಲ್ಲಿ ಸುಮಾರು 1200 ಜನರ ಒಂದು ಸಮೂಹ  ಯುದ್ದದಲ್ಲಿ ರಾಕೆಟ್ ಬಳಕೆ ಮಾಡುವ  ತಂತ್ರಗಾರಿಕೆಯ ಪರಿಣಿತಿ ಪಡೆದಿದ್ದು ,  ಟಿಪ್ಪು ಸುಲ್ತಾನ್ ಕಾಲದಲ್ಲಿ  ಈ ಸಮೂಹ 5000 ದಾಟಿತ್ತು . ಯುದ್ದದಲ್ಲಿ  ರಾಕೆಟ್ ಉಪಯೋಗಿಸುವ ಬಗ್ಗೆ ಟಿಪ್ಪೂಕಾಲದಲ್ಲಿ  ಒಂದು ತಾಂತ್ರಿಕ  ಪುಸ್ತಕ  ಬರೆಯಲಾಗಿದ್ದು ಅದನ್ನು " ಫಾತುಲ್  ಮುಜಾಹಿದೀನ್ ."  ಎಂದು ಕರೆಯಲಾಗಿದೆ. ಇವುಗಳನ್ನು ತಯಾರಿಸುತ್ತಿದ್ದ  ಪ್ರದೇಶವನ್ನು "ತಾರ ಮಂಡಲ್  ಪೇಟೆ" ಎಂದೂ ಸಹ ಕರೆಯಲಾಗುತ್ತಿತ್ತು.  ಮೈಸೂರಿನ  ಅಂತಿಮ ಯುದ್ದಾ ನಂತರ  ಗೆದ್ದ ಬ್ರಿಟೀಷರು ಮೈಸೂರು ರಾಕೆಟ್ ಗಳನ್ನೂ ಬ್ರಿಟನ್ ಗೆ ತೆಗೆದು  ಕೊಂಡು  ಹೋಗಿ  ಅದನ್ನು  ಸಂಶೋಧಿಸಿ , ಮತ್ತಷ್ಟು ಅಭಿವೃದ್ಡಿ ಪಡಿಸಿ  ತಾವೂ ಸಹ  ಹಲವಾರು  ಯುದ್ಧಗಳಲ್ಲಿ  ರಾಕೆಟ್  ಉಡಾಯಿಸಿ ವಿಜಯದ ನಗೆ ಬೀರಿದರು. ಇಂದಿಗೂ ಕೂಡ ಶ್ರೀರಂಗಪಟ್ಟಣದ  ರಾಕೆಟ್ ಗಳ ಬಗ್ಗೆ ವಿಶೇಷ ಗೌರವ  ಇದೆ. "ಅಮೇರಿಕಾದ ನಾಸಾ"  , ಬ್ರಿಟೀಷ್  ಡಿಫೆನ್ಸ್ ಅಕಾಡಮಿ,  ಮುಂತಾದೆಡೆ ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ  ಸಂಶೊಧನೆ  ನಡೆದಿದೆ . ನಮ್ಮ ದೇಶದ ನೆಚ್ಚಿನ  ಮಾಜಿ ರಾಷ್ಟ್ರಪತಿ  ಶ್ರೀ ಅಬ್ದುಲ್ ಕಲಾಮ್  ರವರೂ ಸಹ  ತಮ್ಮ "wings of  fire" ಪುಸ್ತಕದಲ್ಲಿ  ಶ್ರೀರಂಗಪಟ್ಟಣದ ರಾಕೆಟ್ ಗಳ ಬಗ್ಗೆ ಉಲ್ಲೇಖಿಸಿದ್ದಾರೆ . 
ಕಸದ  ಮಡಿಲಲ್ಲಿ  ರಾಕೆಟ್ ಕೋರ್ಟ್ 

ವಿಶ್ವ ರಾಕೆಟ್ ತಂತ್ರಜ್ಞಾನದ ಇತಿಹಾಸದಲ್ಲಿ  ಶ್ರೀರಂಗಪಟ್ಟಣದ  ರಾಕೆಟ್ ಗಳ  ಉಲ್ಲೇಖ ಇಲ್ಲದಿದ್ದರೆ  ಆ ಇತಿಹಾಸ ಅಪೂರ್ಣವೆಂದೆ ಅರ್ಥ  .  ಇಷ್ಟೆಲ್ಲಾ  ಕೀರ್ತಿ  ಕಿರೀಟ  ಹೊಂದಿದ್ದ  ಶ್ರೀರಂಗಪಟ್ಟಣ ದ ರಾಕೆಟ್ ಗಳಿಗೆ ಸಂಬಂದಿಸಿದ  ಒಂದು ಜಾಗ  "ರಾಕೆಟ್ ಕೋರ್ಟ್"  ತನ್ನ ಅವಸಾನ   ಹೊಂದುತ್ತಾ  ಮರಣ ಶಯ್ಯೆ ಯಲ್ಲಿದೆ. ಹೌದು  ಈ ಜಾಗದಲ್ಲಿ ರಾಕೆಟ್  ಉಡಾವಣೆ ಮಾಡುತ್ತಿದ್ದರೋ ಅಥವಾ  ತಯಾರು ಮಾಡುತ್ತಿದ್ದರೋ, ತಿಳಿಯದು  ಆದರೆ  ರಾಕೆಟ್ ಕೋರ್ಟ್ ಎಂದು ಇಂದಿಗೂ  ಇತಿಹಾಸ ತಿಳಿದಿರುವ  ಹಲವರು ಇದನ್ನು ಗುರುತಿಸುತ್ತಾರೆ.
ರಾಕೆಟ್ ಕೋರ್ಟ್ ಒಳನೋಟ  ಹಿಂದಿನದು 
ರಾಕೆಟ್ ಕೋರ್ಟ್  ಒಳ ನೋಟ ಇಂದು  
ಇಂದು ಈ ರಾಕೆಟ್ ಕೋರ್ಟ್  ಜನರ ಮನಸಿನಿಂದ  ಮರೆಯಾಗಿದ್ದು, ಕಸದ ಲೋಕದಲ್ಲಿ  ಲೀನವಾಗುತ್ತಾ  , ಮನುಷ್ಯರ ಮಲದಿಂದ  ಅಲಂಕಾರ ಗೊಂಡು  ಮರಣ  ಶೈಯ್ಯೆ  ಯಲ್ಲಿದೆ.   ಬ್ರಿಟೀಷರು ಇದನ್ನು   " garison  ball  alley "   ಎಂದೂ ಸಹ ಕರೆದಿದ್ದಾರೆ. ಬಹುಷಃ  ಬ್ರಿಟೀಷರು  ಈ ಪ್ರದೇಶದಲ್ಲಿ ಚೆಂಡಿಗೆ ಸಂಬಂದಿಸಿದ  ಯಾವುದೋ ಆಟಕ್ಕೆ ಉಪಯೋಗಿಸಿರುವ ಸಾಧ್ಯತೆ ಇದೆ  80 ಅಡಿ ಉದ್ದಾ 40 ಅಡಿ ಅಗಲ , ಹಾಗು 35  ಅಡಿ ಎತ್ತರದ ಗೋಡೆ ಗಳನ್ನೂ  ಇಂದು ಕಾಣಬಹುದಾಗಿದೆ.  ಇದರ ದುಸ್ತಿತಿ ಬಗ್ಗೆ    ಯಾರಿಗೂ ಯೋಚನೆಯಿಲ್ಲದೆ   ಪ್ರವಾಸಿಗಳೂ ಹೋಗಲಾರದ  ಹಂತಕ್ಕೆ ಈ ಸ್ಮಾರಕ  ತಲುಪಿದೆ. ಸುತ್ತಲೂ  ಮನೆಗಳಿದ್ದು  ಒಂದು ಓಣಿ ಮಾತ್ರ  ಇಲ್ಲಿಗೆ ತಲುಪಲು  ಇದೆ.  ಇತಿಹಾಸದ ಮಹತ್ವದ  ಕುರುಹನ್ನು  ಅಳಿಸಿಹಾಕುತ್ತಾ  ಮಹಾನ್  ಭಾರತೀಯರಾಗಿ  ಮೆರೆಯುತ್ತಿದ್ದೇವೆ.   ಮುಂದೊಮ್ಮೆ ಇತಿಹಾಸವನ್ನು ದುರ್ಬೀನ್ ಹಾಕಿ ಹುಡುಕ ಬೇಕಾಗುತ್ತದೆ ಅಲ್ವೇ ??

ಭಾನುವಾರ, ಜುಲೈ 8, 2012

ಮೂಡಲ ದಿಕ್ಕಿನಿಂದ ಬಡಗಲ ದಿಕ್ಕಿಗೆ ತಿರುಗಿದ ಹನುಮಂತ, ಸನಿಹದಲ್ಲೇ ಇದ್ದಾನೆ ಜ್ಯೋತಿರ್ ಮಹೇಶ್ವರ !!!!!


ಮೂಡಲ ಬಾಗಿಲ ಆಂಜನೇಯ ಸ್ವಾಮೀ ದೇವಾಲಯ.

ಇತಿಹಾಸವೇ ಹಾಗೆ ವಿಚಿತ್ರ ತಿರುವಿನ ಘಟನೆಗಳ ಸರಮಾಲೆ, ಅಲ್ಲಿ ನಮ್ಮ ತರ್ಕ ,ಕುತರ್ಕ, ಇವುಗಳಿಗೆ ಅವಕಾಶವಿಲ್ಲ.ನಾವಿಂದು ಸ್ವಾತಂತ್ರ್ಯದ ಸಮಾಜದಲ್ಲಿ ಅಂದು ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂದು ಏನೇ ಪ್ರಲಾಪಿಸಿದರೂ ಆಗಿಹೋಗಿರುವ ಐತಿಹಾಸಿಕ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲಾ.ಇತಿಹಾಸವನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ನಾವು ಅಂದಿನವರಾಗಿ ಇದ್ದು ಅರ್ಥ ಮಾಡಿಕೊಳ್ಳ ಬೇಕು , ಆದರೆ ನಾವು ನಮ್ಮ ಮೂಗಿನ ನೇರಕ್ಕೆ ಅದನ್ನು ವಿಶ್ಲೇಷಣೆ ಮಾಡಿ ಇತಿಹಾಸವನ್ನು ಗೊಂದಲದ ಗೂಡಾಗಿಸಿ ಘಟನೆಗಳನ್ನು ಮರೆ ಮಾಚುತ್ತಿದ್ದೇವೆ.ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಎರಡು ಹಳೆ ದೇವಾಲಯಗಳನ್ನು ಪರಿಚಯ ಮಾಡಿಕೊಡುತ್ತೇನೆ.
ಮೂಡಲದಿಂದ ಬದಗಳಿಗೆ ತಿರುಗಿದ ಹನುಮ

ಜುಮ್ಮಾ ಮಸೀದಿ ಹತ್ತಿರದಲ್ಲಿ ಹಾದು ಹೋಗುವ ಪೇಟೆ ಬೀದಿಯಲ್ಲಿ ಊರಕದೆಗೆ ತೆರಳುವಾಗ ನಿಮಗೆ  ಬೀದಿಯ ಎಡ ಭಾಗಕ್ಕೆ ಮೂಡಲ ಬಾಗಿಲ ಆಂಜನೇಯ ದೇಗುಲ ಸಿಗುತ್ತದೆ. ಈ ದೇವಾಲಯವು ಮೊದಲು ಶ್ರೀ ರಂಗಪಟ್ಟಣ  ಕೋಟೆಯ  ಪೂರ್ವದ ಬಾಗಿಲಿಗೆ ಅಭಿಮುಖವಾಗಿ  ಇತ್ತೆಂದೂ ನಂತರ ಇದನ್ನು ಸ್ಥಳಾಂತರಿಸಿ ಇಲ್ಲಿ ಉತ್ತರಾಭಿಮುಖವಾಗಿ  ಪ್ರತಿಷ್ಟಾಪಿಸಲಾಯಿತೆಂದು ಹೇಳುತ್ತಾರೆ.ಹಲವು ಕಾರಣಗಳಿಂದ ಮಹಾ ಬಲವಂತ ನಾದ ಹನುಮನು  ಇಲ್ಲಿ ಮೂಡಲ ದಿಕ್ಕಿಗೆ   ಬದಲು ಬಡಗಲ ದಿಕ್ಕಿಗೆ  ಮುಖ ಮಾಡಿ ಇತಿಹಾಸವನ್ನು ಮೆಲುಕು ಹಾಕುತ್ತಾ ನಿಂತಿದ್ದಾನೆ , ಇಲ್ಲಿ ತನ್ನ ಸೌಹಾರ್ಧತೆಯನ್ನು ಮೆರೆದಿದ್ದಾನೆ.ದೇವಾಲಯದ ಒಳಗೆ ಸುಂದರ  ಹನುಮ ಮೂರ್ತಿ ಇದ್ದು ಪ್ರವಾಸಿಗಳು ಇದನ್ನು ದರ್ಶನ ಮಾಡಲು ಉತ್ತಮವಾಗಿದೆ.

ಗುರುವಾರ, ಜೂನ್ 14, 2012

ಶ್ರೀ ರಂಗಪಟ್ಟಣ ಯುದ್ದ ಗೆದ್ದ ಸೈನಿಕ ಅಧಿಕಾರಿಗಳಿಗೆ ಮೆಡಲ್ ಕೊಟ್ರಂತೆ.!!

ಚಿತ್ರ ಕೃಪೆ  ಅಂತರ್ಜಾಲ


ಇತಿಹಾಸ ಕೆದಕಿದಷ್ಟೂ ನಾವರಿಯದ ಮಾಹಿತಿ ಎದ್ದುಬರುತ್ತದೆ. ಹುಡುಕಿದಷ್ಟೂ ನಿಘೂಡ ವಿಚಾರಗಳು ತಿಳಿದುಬರುತ್ತದೆ. ಅಂತಹ ಒಂದು ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರು ಭಾರತದಲ್ಲಿ ಹಲವಾರು ಸಾಮ್ರಾಜ್ಯಗಳನ್ನು ಗೆದ್ದಿದ್ದು ಎಲ್ಲರಿಗೂ ತಿಳಿದ ವಿಚಾರ ಆದರೆ ಗೆದ್ದ ಯಾವುದೇ ಸಾಮ್ರಾಜ್ಯದ ಹೆಸರಿನಲ್ಲಿ ಯುದ್ದ ಗೆದ್ದ ನೆನಪಿಗೆ ಆ ಸಾಮ್ರಾಜ್ಯದ ಹೆಸರಿನಲ್ಲಿ ಮೆಡಲ್ ನೀಡಿದ ಉದಾಹರಣೆ ಬಹಳ ಕಡಿಮೆ. ಆದರೆ "ಶ್ರೀ ರಂಗಪಟ್ಟಣ" ಅಥವಾ "ಸೇರಿಂಗ ಪಟ್ಟಂ" ವಿಚಾರದಲ್ಲಿ ಬ್ರಿಟೀಷರು ಅಚ್ಚರಿ ಮೂಡಿಸಿದ್ದಾರೆ. ಹೌದು 1799  ರ ಮೇ   4 ರಂದು ಶ್ರೀ ರಂಗ ಪಟ್ಟಣದ  ಪ್ರವೇಶ ಪಡೆದ ಬ್ರಿಟೀಷರು ಅಂತಿಮ ಯುದ್ದ ವನ್ನು ಗೆದ್ದರು . ಅವರ ಶಕ್ತಿ ಹಾಗು ಯುಕ್ತಿಗೆ ಸವಾಲಾಗಿ ನಿಂತಿದ್ದ , ಹಾಗು ಅವರ ಯುದ್ದ ತಂತ್ರಕ್ಕೆ ಸವಾಲಾಗಿ ನಿಂತಿದ್ದ ಒಂದು ಸಣ್ಣ ದ್ವೀಪದ ಮೇಲಿನ ಯುದ್ದ  ಅವರಿಗೆ  ಗೆಲುವಿನ ಗರಿ ಮೂಡಿಸಿತ್ತು. ಯುದ್ದದ ವಿಚಾರದಲ್ಲಿ ಅತ್ಯಂತ ಹೆದರಿಕೆ, ಗೌರವ ಮೂಡಿಸಿದ್ದ ಈ "ಶ್ರೀ ರಂಗ ಪಟ್ಟಣ ಅಥವಾ ಸೇರಿಂಗ ಪಟ್ಟಂ " ಯುದ್ದ ಗೆದ್ದ ನೆನಪಿಗಾಗಿ  ಯುದ್ಧ ದಲ್ಲಿ ಪಾಲ್ಗೊಂಡಿದ್ದ ತನ್ನ ಅಧಿಕಾರಿಗಳು, ಸೈನಿಕರಿಗೆ   1801 ರಲ್ಲಿ   ಸನ್ಮಾನ ಮಾಡಿ ಸುಮಾರು 50000 ಕ್ಕೂ ಹೆಚ್ಚು    "ಸೇರಿಂಗ ಪಟ್ಟಂ ಮೆಡಲ್ " ನೀಡಿ ಗೌರವಿಸಿದೆ.http://en.wikipedia.org/wiki/Seringapatam_medal ಲಿಂಕ್ ನಲ್ಲಿ ಈ ಬಗ್ಗೆ ಮಾಹಿತಿ ಇದೆ ನೋಡಿ.ವಿಕಿ ಪೀಡಿಯಾ ಮಾಹಿತಿಯಂತೆ 350 ಚಿನ್ನ,1035 ಬೆಳ್ಳಿ, 5000 ಕಂಚು ಹಾಗು 45000  ಟಿನ್  ಮೆಡಲ್ಗಳನ್ನು ನೀಡಿರುವುದಾಗಿ ತಿಳಿಸಲಾಗಿದೆ. ಚಿತ್ರ ಕೃಪೆ http://www.fitzmuseum.cam.ac.uk/coins/collection/watson/page327.html ಹಾಗು ವಿಕಿಪೀಡಿಯ

ಶುಕ್ರವಾರ, ಜೂನ್ 1, 2012

ಬ್ರಿಟೀಷರು ತಯಾರಿಸಿದ್ದ ಸೆರಿಂಗಪಟಂ ಹೆಸರಿನ ಒಂದು ಯುದ್ದ ನೌಕೆ

ಸೆರಿಂಗ ಪಟಂ ನೌಕೆ

ಇತಿಹಾಸದ ವಿಶೇಷವೇ ಹಾಗೆ ಯಾವುದೋ ಮಾಹಿತಿ ಎಲ್ಲೋ ಅಡಗಿ ಕುಳಿತಿರುತ್ತದೆ.ಯಾವ ಊರಿನ  ಬಗೆಗಿನ ಐತಿಹಾಸಿಕ ಘಟನೆ ಇನ್ಯಾವ ಊರಿನಲ್ಲೋ  ನಡೆದಿರುತ್ತದೆ. ಅಂತಹ ಒಂದು ಆಸಕ್ತಿದಾಯಕ ಮಾಹಿತಿ ಇಲ್ಲಿದೆ ನೋಡಿ . ಬ್ರಿಟೀಷರಿಗೆ "ಸೆರಿಂಗ ಪಟಂ " ಅಥವಾ" ಶ್ರೀ ರಂಗ ಪಟ್ಟಣ " ಎಂಬ ಊರಿನ ಬಗ್ಗೆ ಅದೇನು ಸೆಳೆತವೋ ಕಾಣೆ ಬಹುಷಃ ಆ ಕಾಲದಲ್ಲಿ ಈ ಊರಿನ ಹೆಸರಿನಲ್ಲಿ ಹಲವಾರು ಆಸಕ್ತಿದಾಯಕ ಐತಿಹಾಸಿಕ  ಕಾರ್ಯಗಳನ್ನು ಮಾಡಿದ್ದಾರೆ. ಅಂತಹ ಒಂದು ಘಟನೆ ಇಲ್ಲಿದೆ.ಎಲ್ಲರಿಗೂ ತಿಳಿದಂತೆ ಶ್ರೀ ರಂಗ ಪಟ್ಟಣದ  ಮೇಲೆ ಬ್ರಿಟೀಷರು 4 ಮೇ 1799 ರಲ್ಲಿ ವಿಜಯ ಸಾಧಿಸಿದರು. ಆ ನಂತರ "ಬ್ರಿಟೀಶ್ ರಾಯಲ್ ನ್ಯಾವಿ " ವತಿಯಿಂದ" ಸೆರಿಂಗ ಪಟಂ "  ಹೆಸರಿನ ಒಂದು ಯುದ್ದ ನೌಕೆ ತಯಾರಿಸಲು ಉದ್ದೇಶಿಸಿ , "ಬಾಂಬೆ ಡಾಕ್ ಯಾರ್ಡ್" ನಲ್ಲಿ  ಈಸ್ಟ್ ಇಂಡಿಯಾ ಕಂಪನಿಗೆ  ನೌಕೆ ತಯಾರಿಸಲು  ದಿನಾಂಕ  21 -08 -1813 ರಲ್ಲಿ  ಸೂಚಿಸಲಾಯಿತು.ಅದರಂತೆ ಈಸ್ಟ್ ಇಂಡಿಯಾ ಕಂಪನಿ ದಿನಾಂಕ 5 ಸೆಪ್ಟೆಂಬರ್  1819  ರಿಂದ 10 ಏಪ್ರಿಲ್  1821 ರವರೆಗೆ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ "ಸೆರಿಂಗ ಪಟಂ " ಹೆಸರಿನ ಯುದ್ಧ ನೌಕೆಯನ್ನು ತಯಾರಿಸಿ  "ಬ್ರಿಟೀಶ್ ರಾಯಲ್ ನ್ಯಾವಿ " ವಶಕ್ಕೆ ನೀಡಲಾಯಿತು. ನಂತರ ಈ ನೌಕೆ ಹಲವಾರು ಐತಿಹಾಸಿಕ ಸೇವೆ ಸಲ್ಲಿಸಿ "ಸೆರಿಂಗ ಪಟಂ " ಅಥವಾ "ಶ್ರೀ ರಂಗ ಪಟ್ಟಣ" ಹೆಸರನ್ನು ಪ್ರಸಿದ್ದ ಗೊಳಿಸಿದೆ. ಉತ್ತಮ ಸೇವೆಸಲ್ಲಿಸಿದ ಈ ನೌಕೆಯನ್ನು ಆಫ್ರಿಕಾ ಖಂಡದ "ಕೇಪ್ ಆಫ್ ಗುಡ್ ಹೋಪ್" ನಲ್ಲಿ    1873  ರ ವರ್ಷದಲ್ಲಿ   ಒಡೆದು ಹಾಕಲಾಯಿತು . ಈ ನೌಕೆ ಸಾಗರದಲ್ಲಿ  ಪ್ರ ಪ್ರಥಮ ವಾಗಿ  ಅಂಚೆ ಸಾಗಿಸಿ ದಾಖಲೆ ಮಾಡಿದ ನೆನಪಿನಲ್ಲಿ ಒಂದು ಅಂಚೆ ಚೀಟಿಯನ್ನು ಈ ನೌಕೆಯ ಸ್ಮರಣಾರ್ಥ ಹೊರಡಿಸಲಾಗಿದೆ.

ಭಾರತ ದೇಶದ ಒಂದು ಊರಿನ  ಹೆಸರನ್ನು ಇತಿಹಾಸದಲ್ಲಿ ಬೆಳಗಿಸಿದ ಆ ನೌಕೆಗೆ  ನಾವೆಲ್ಲಾ ಸಲಾಂ ಹೇಳೋಣ ಅಲ್ವೇ.{ ಈ ಲೇಖನದ ಸಂಪೂರ್ಣ  ಮಾಹಿತಿಯನ್ನು     http://en.wikipedia.org/wiki/Seringapatam_class_frigate  ಹಾಗೂ   http://www.shipstamps.co.uk/forum/viewtopic.php?f=2&t=8131#!lightbox/0/    ಅಂತರ್ ಜಾಲ ತಾಣ ಗಳಿಂದ ಕೃತಜ್ಞತಾ ಪೂರ್ವಕವಾಗಿ ಪಡೆಯಲಾಗಿದೆ.}

ಶನಿವಾರ, ಫೆಬ್ರವರಿ 18, 2012

ಆಸ್ಟ್ರೇಲಿಯಾ ಖಂಡದ ಸಮೀಪ ಶ್ರೀರಂಗಪಟ್ಟಣ[seringapattam ] ದ್ವೀಪ !!!

ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ seringapattam ದ್ವೀಪ [ಕನ್ನಡಿಗರ ಹೆಮ್ಮೆ]
ಈ ಕನ್ನಡ ನಾಡಿನ ಕೀರ್ತಿಪತಾಕೆ ಹಿಂದೂ ಮಹಾ ಸಾಗರದಲ್ಲಿ ನೆಲೆಸಿರುವುದು ಹೀಗೆ.
ನಮಸ್ಕಾರ ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಒಂದು ಆಶ್ಚರ್ಯಕರ ವಿಚಾರ ತಿಳಿಸಿಕೊಡುತ್ತೇನೆ. ನಮಗೆಲ್ಲಾ ಗೊತ್ತು ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಸಣ್ಣ ತಾಲೂಕು ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಅಂತ.ಈ ಊರನ್ನು ಹಿಂದೆ ಆಂಗ್ಲರು serigapattam ಅಂತಾನು ಕರೀತಿದ್ರು.ಈಗ ನೋಡಿ ಆಸ್ಟ್ರೇಲಿಯ ದೇಶದ ಪಶ್ಚಿಮ ದಿಕ್ಕಿಗೆ ಸಮೀಪ ಒಂದು ಕೊರಾಲ್ ದ್ವೀಪಕ್ಕೆ seringapattam ಅಂತಾ ಹೆಸರಿಟ್ಟು ಕನ್ನಡ ನಾಡಿನ ಈ ಊರಿನ ಹೆಸರು ಮೆರೆಯುವಂತೆ ಮಾಡಲಾಗಿದೆ. ಅಂತರ್ಜಾಲ ಜಾಲಾಡಿದಾಗ ಈ ಹಿಂದೆ ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ಮೈಸೂರಿನ ಅಂತಿಮ ಯುದ್ದ [೧೭೯೯] ದಲ್ಲಿ ಭಾಗವಹಿಸಿ ನಂತರ ಆಸ್ತ್ರೆಲಿಯಗೆ ತೆರಳಿದ ಸ್ಕಾಟ್ ಕುಟುಂಬ ಒಂದು ಈ ದ್ವೀಪವನ್ನು ಖರೀದಿಸಿಶ್ರೀ ರಂಗ ಪಟ್ಟಣದಲ್ಲಿ ನಡೆದ ಅಂತಿಮ ಕಾಳಗದ ನೆನಪಾಗಿ ಆ ದ್ವೀಪಕ್ಕೆ seringapattam ಅಂತಾ ಹೆಸರನ್ನು ನಾಮಕರಣ ಮಾಡಿ,ಸಂಭ್ರಮಿಸಿದೆ.ಬಹುಷಃ ಈ ದೇಶದ ಯಾವುದೇ ಊರಿನ /ಪಟ್ಟಣದ ಬಗ್ಗೆ ಇಂಥಹ ಘಟನೆ ಇರುವುದಿಲ್ಲ .ಬನ್ನಿ ಇದರ ಬಗ್ಗೆ ಕೆಲವು ಚಿತ್ರಗಳನ್ನು ಅಂತರ್ಜಾಲ ಕೃಪೆ ಇಂದ ನಿಮಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿದ್ದೇನೆ ನೋಡಿಬಿಡೋಣ ಬನ್ನಿ
ಉಪಗ್ರಹ ಚಿತ್ರ ದಲ್ಲಿ ಸೇರಿಂಗ ಪಟ್ಟಂ [ಶ್ರೀ ರಂಗ ಪಟ್ಟಣ ]ದ್ವೀಪ ಕಾಣುವುದು ಹೀಗೆ!!

ದ್ವೀಪದ ಮತ್ತೊಂದು ಸುಂದರ ನೋಟ .
Scott and Seringapatam Reefs is a group of atoll-like reefs in the Timor Sea more than 300 km northwest of Cape Leveque, Western Australia, on the edge of the continental shelf. There are three or four separate reef structures, depending on whether Scott Reef Central is counted separately. The group is just one of a number of reef formations off the northwest coast of Australia and belongs to Western Australia. Further to the northeast are Ashmore and Cartier Islands, and to the southwest are the Rowley Shoals......................................................

Each of the three reefs rises steeply from the seabed 400 to 500 m below. Much of the reaf area dries at low tide, but besides Sandy Islet of Scott Reef South, there are only a few rocks and sandbanks above the high water mark.
  • Scott Reef South (also Horseshoe Reef or South Reef) is a large crescent-shaped formation that has a rare and unusual double reef crest. Its lagoon, has depths of over 24 m throughout the greater portion. The reef with its lagoon covers an area of 144 km².
  • Scott Reef Central, because of its proximity occasionally subsumed within Scott Reef South, lies off West Hook (the western extremity of the crescent of Scott Reef South), with Sandy Islet at 14°03′S 121°46′E / 14.05°S 121.767°E (690 meters north-south, up to 110 meters wide, with an area of 0.05 km²). This reef falls dry to the extent of 0.8 to 1.6 km from the islet. There is a conspicuous tower on the islet and also a boulder with a height 2.4 m near its northern end. A detached reef, which dries 0.6 m, lies 2.4 km northeast of Sandy Islet. The passage between Scott Reef South and Scott Reef Central is only 33 m deep, much less than the passages between the other reefs (366 m between Scott Reef South and Scott Reef North).
  • Scott Reef North consists of a large, approximately circular-shaped, reef lying 23 km southwest of Seringapatam Reef. The reef is composed of a narrow reef-crest that is backed by broad reef flats — much of which becomes exposed at low tide — and a deep central lagoon that is connected to the open sea by two delta-like channels. The reef with its lagoon covers an area of 106 km².
  • Seringapatam Reef is located at 13°40′S 122°05′E / 13.667°S 122.083°E, 23 km north of Scott Reef North. This reef is named after the Battle of Seringapatam, the historical last and decisive battle fought between Tipu Sultan and the British Raj forces in Southern India. It is a small circular-shaped reef. Its narrow reef rim encloses a relatively deep lagoon. Much of the reef becomes exposed at low tide. There are large boulders around its edges, with a few sandbanks, which rise about 1.8 m above the water, on the west side. Seringapatam Reef covers an area of 55 km² (including the central lagoon). ನೀವು ಈ ತಾಣಕ್ಕೆ ಹೋಗಿ ಕನ್ನಡ ನಾಡಿನ ಹೆಮ್ಮೆಯ ದ್ವೀಪ ಒಂದರ ಹೆಸರನ್ನು ದೂರದ ಆಸ್ಟ್ರೇಲಿಯ ಸಮೀಪ ಇಡಲಾಗಿರುವ ಸೋಜಿಗವನ್ನು ಅನುಭವಿಸಿ.ಬನ್ನಿ ಹೇಳೋಣ ನಮ್ಮ ದೇಶದ ಇತಿಹಾಸಕ್ಕೆ ಜಯವಾಗಲಿ. ನೋಡಿದ್ರಾ ನಮ್ಮ ದೇಶದ ಇತಿಹಾಸ ಎಂಥಹ ವಿಶೇಷ ಹೊಂದಿದೆ.ಆಲ್ವಾ ನೀವೇನಂತೀರಾ!!![ ಲೇಖನದ ವಿವರಗಳನ್ನು ಅಂತರ್ಜಾಲದ ವಿಕಿಪೀಡಿಯ http://en.wikipedia.org/wiki/Scott_and_Seringapatam_Reefs ಹಾಗುಇನ್ನಿತರ ಹಲವಾರುತಾಣಗಳಿಂದ ಪಡೆಯಲಾಗಿದೆ]

ಭಾನುವಾರ, ಫೆಬ್ರವರಿ 12, 2012

ಶ್ರೀ ರಂಗ ಪಟ್ಟಣದಲ್ಲಿ ಫ್ರೆಂಚ್ ಕ್ರಾಂತಿಕಾರಿ ಜಾಕೊಬಿನ್ ಕ್ಲಬ್ ಇತ್ತಂತೆ ...........................! ಜಾಕೊಬಿನ್ ಕ್ಲಬ್ ಎಂದರೇನು ?


ಜಾಕೊಬಿನ್  ಕ್ಲಬ್  ಲಾಂಛನ [ಚಿತ್ರ ಕೃಪೆ ಅಂತರ್ಜಾಲ]
ಹೌದು ಇತಿಹಾಸ ಕೆದಕುತ್ತಾ ಹೋದಂತೆ ಮತ್ತಷ್ಟು ಹೊಸ ವಿಚಾರ  ಹೊರಬರುತ್ತದೆ. ಕಳೆದ ಸಂಚಿಕೆಯಲ್ಲಿ ಶ್ರೀ ರಂಗ ಪಟ್ಟಣ ಕ್ರಿಕೆಟ್ ಇತಿಹಾಸಕ್ಕೆ ತಳುಕು    ಹಾಕಿಕೊಂಡಿತ್ತು, ಈ ಸಂಚಿಕೆಯಲ್ಲಿ ಮತ್ತಷ್ಟು ಅಚ್ಚರಿಯಾಗಿ ಫ್ರಾನ್ಸ್  ಅಂತರ್ ರಾಷ್ಟ್ರೀಯ ಸಂಘಟನೆ "ಜಾಕೊಬಿನ್ ಕ್ಲಬ್ "  ಶಾಖೆ  ಅನ್ನು ಭಾರತ ಖಂಡದಲ್ಲಿ ಹೊಂದಿದ್ದ ಏಕೈಕ ತಾಣವಾಗಿ ಹೊಮ್ಮಿದೆ.ಬನ್ನಿ ಮೊದಲು ಫ್ರಾನ್ಸ್ ನ ಜಾಕೊಬಿನ್ ಕ್ಲಬ್ ಎಂದರೇನು ತಿಳಿಯೋಣ.
ಫ್ರಾನ್ಸ್ ದೇಶದ ಜಾಕೊಬಿನ್ ಕ್ಲಬ್ ನೋಟ[ಚಿತ್ರ ಕೃಪೆ ಅಂತರ್ಜಾಲ ]

1789  ರ  ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಸಮಯವಾಗಿತ್ತು , ಆ ಸಂದರ್ಭದಲ್ಲಿ ಒಂದು ಕ್ರಾಂತಿ ಕಾರಿ ದೋರಣೆ ಉಳ್ಳ  "ಜಾಕೊಬಿನ್ ಕ್ಲಬ್ "    ಅಸ್ತಿತ್ವಕ್ಕೆ ಬಂದಿತು , ಇದರ ಹಲವು ಕಾರ್ಯಕ್ರಮಗಳು ಅಂದಿನ ಫ್ರಾನ್ಸ್ ದೇಶ ದ ಜನರಿಗೆ ಇಷ್ಟವಾದ ಕಾರಣ ಬಹಳ ಬೇಗ ತನ್ನ ಶಾಖೆಗಳನ್ನು ಫ್ರಾನ್ಸ್ ದೇಶಾದ್ಯಂತ ವಿಸ್ತರಿಸಿಕೊಂಡು 1789  ರಿಂದ ಸುಮಾರು 1800 ರವರೆಗೂ ಫ್ರಾನ್ಸ್ ದೇಶದ ಕ್ರಾಂತಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿತು.ಅಂತಹ ಒಂದು ಸಂಸ್ಥೆಯ ಒಂದು ಶಾಖೆ  ಶ್ರೀ ರಂಗ ಪಟ್ಟಣದಲ್ಲಿ ಅಸ್ತಿತ್ವದಲ್ಲಿತ್ತು. ಇದರ ಆರಂಭದ ಮುಖ್ಯ ಅತಿಥಿ ಸ್ವತಹ "ಟಿಪ್ಪೂ ಸುಲ್ತಾನನೆ"   ಆಗಿದ್ದ  ಹಾಗು ತಾನೂ ಸಹ "ಜಾಕೊಬಿನ್ ಕ್ಲಬ್"  ನ ಸದಸ್ಯನಾಗಿ ಫ್ರಾನ್ಸ್ ದೇಶದ ಸ್ವಾತಂತ್ರ ಕ್ರಾಂತಿಗೆ ಬೆಂಬಲ ಘೋಷಿಸಿದ ಎಂದು ತಿಳಿದು ಬರುತ್ತದೆ.ಹಾಗೂ  1797 ರ ಮೇ 05  ರಂದು ಶ್ರೀ ರಂಗ ಪಟ್ಟಣದಲ್ಲಿ ಜಾಕೊಬಿನ್ ಕ್ಲಬ್ಬಿನ ಪದಾಧಿಕಾರಿಗಳ ಆಯ್ಕೆ ನಡೆದು 1797  ರ ಮೇ 14  ರಂದು  ಶ್ರೀ ರಂಗ ಪಟ್ಟಣದಲ್ಲಿ ಜಾಕೊಬಿನ್ ಕ್ಲಬ್ ಪ್ರಾರಂಭೋತ್ಸವಕ್ಕೆ  ನೂರಾರು ಖುಶಾಲು ತೋಪು, ಹಾಗು ರಾಕೆಟುಗಳನ್ನು ಹಾರಿಸಿ  ಸಂಭ್ರಮಿಸಲಾಯಿತೆಂದು  ಫ್ರಾನ್ಸ್ ಸ್ವಾತಂತ್ರ ಕ್ರಾಂತಿಯ ನೆನಪಿನಲ್ಲಿ  ಒಂದು ಗಿಡವನ್ನು ಟಿಪ್ಪೂ ಸುಲ್ತಾನನ ಕೈಲಿ ನೆಡಿಸಿ, ಫ್ರಾನ್ಸ್ ದೇಶದ  ಸ್ವಾತಂತ್ರ ದ್ವಜಾ ರೋಹಣ   ಮಾಡಲಾಯಿತೆಂದು  ತಿಳಿದು ಬರುತ್ತದೆ.   ಜಾಕೊಬಿನ್ ಕ್ಲಬ್ ಗಳ ಬಗ್ಗೆ ಅಂದಿನ ದಿನದಲ್ಲಿ ಭಾರತದ ಯಾವ ಮೂಲೆಯಲ್ಲೂ ಅಸ್ತಿತ್ವದ ಬಗ್ಗೆ ಇಂತಹ ಮಾಹಿತಿ ಸಿಗಲಾರದು .ಇದೂ ಸಹ ಈ  ಪುಟ್ಟ ಊರಿನ  ಅಂತರ್ರಾಷ್ಟ್ರೀಯ ಖ್ಯಾತಿ  ನಿರೂಪಿಸುತ್ತದೆ.   ನಂಬಿಕೆ ಬರಲಿಲ್ಲ ವೆ ಇಲ್ಲಿದೆ ನೋಡಿ ಆಧಾರ ಅಂತರ್ಜಾಲ   ಲಿಂಕ್ ಗಳ ಮಾಹಿತಿ ಇಲ್ಲಿದೆ ನೋಡಿ.   {ದುರಂತ ವೆಂದರೆ ಶ್ರೀ ರಂಗ ಪಟ್ಟಣದ ಜಾಕೊಬಿನ್ ಕ್ಲಬ್ ನ ಬಗ್ಗೆ  ಹೆಚ್ಚಿನ ಮಾಹಿತಿ ಬ್ರಿಟನ್ ಹಾಗು ಫ್ರಾನ್ಸ್ ನಲ್ಲಿ ಇರುವುದು}.
ಜಾಕೊಬಿನ್ ಕ್ಲಬ್ ನ ಇನ್ನೊಂದು ನೋಟ[ಚಿತ್ರ ಕೃಪೆ ಅಂತರ್ಜಾಲ ]
       
1 ]http://en.wikipedia.org/wiki/Jacobin_Club      After the March on Versailles in October 1789, the club, still entirely composed of deputies, followed the National Constituent Assembly to Paris, where it rented the refectory of the monastery of the Jacobins in the Rue Saint-Honoré, adjacent to the seat of the Assembly. The name "Jacobins", given in France to the Dominicans (because their first house in Paris was in the Rue St Jacques), was first applied to the club in ridicule by its enemies. The title assumed by the club itself, after the promulgation of the constitution of 1791, was Société des amis de la constitution séants aux Jacobins à Paris, which was changed on 21 September 1792, after the fall of the monarchy, to Société des Jacobins, amis de la liberté et de l'égalité (Society of Jacobins, friends of liberty and equality). It occupied successively the refectory, the library, and the chapel of the monastery.
2} http://www.tigerandthistle.net/tipu332.htm        
          
fter the captivating scenes of the Hostage Princes in 1792, the jubilation which followed the successful Storming of Seringapatam was quickly exploited by artists and printmakers. Subscribers were sought, not only in Britain, but through agents in Madras, Calcutta and Bombay, and prints were dedicated to influential figures in the Mysore campaigns: Baird; Dundas; Richard Wellesley or His most gracious Majesty George III. The prints were often published in sets of four: The Assault and Taking of Seringapatam; 'The Last Effort and Fall of Tipu Sultan; The Body of Tipu Sultan recognised by his Family; The Surrender of the 'Two Sons of Tipu Sultan (to Major General Baird). For the popular market, engravings of the dying Tipu and the surrender of his sons were translated into glass paintings. Orme and Bartolozzi made engravings after Mather Brown's paintings; Grozer, Rogers, Laminet and Cardon after Singleton; Reynolds after Ker Porter, and Cardon and Schiavonetti after Allan. Nor was the market restricted to Great Britain. Schiavonetti's series after Singleton was published in London, but also sold by the Augsburg Akademy, with inscriptions in German and English. Other engravings have both English and French inscriptions.

Following the French links to India, and Seringapatam, there is evidence for the most remarkable demonstration of contemporary French political ideals. A French paper was found in Tipu's Palace in 1799, entitled 'Proceedings of a Jacobin Club formed at Seringapatam by the French Soldiers in the Corps commanded by M.Dompart. ' A Scotsman, Capt W Macleod, attested to its authenticity. The Paper listed by name 59 Frenchmen in the pay of 'Citizen Tippoo'; it described the gathering of a Primary Assembly on 5th May 1797, to elect a President, Francois Ripaud, and other officers. The 'Rights of Man' were proclaimed, and Ripaud presented a lecture on Republican principles. Further deliberations and formalities followed before, on 14th May, the National flag was ceremonially raised and a small delegation were formally received by Tipu. The 'Citizen Prince' ordered a salute of 2,300 cannon, all the musketry and 500 rockets, with a further 500 cannon firing from the Fort. A Tree of Liberty was planted, and crowned with a Cap of Equality, before Ripaud challenged his co-patriots: 'Do you swear hatred to all Kings, except Tippoo Sultaun, the Victorious, the Ally of the French Republic - War against all Tyrants, and love towards your Country and that of Citizen Tippoo.' 'Yes! We swear to live free or die,' they replied.

ಸೋಮವಾರ, ಫೆಬ್ರವರಿ 6, 2012

ಶ್ರೀ ರಂಗ ಪಟ್ಟಣ ಭಾರತ ಕ್ರಿಕೆಟ್ ಇತಿಹಾಸಕ್ಕೂ ತಳುಕು ಹಾಕಿಕೊಂಡಿದೆ.!!!!

ಇತಿಹಾಸ ಕಾಲದ  ಕ್ರಿಕೆಟ್ ಪಂಧ್ಯ  ೧೭೯೯ ರ ಆಸುಪಾಸು

ಇದೇನಿದು ಶ್ರೀ ರಂಗ ಪಟ್ಟಣ ಸ್ಮಾರಖ ಪರಿಚಯ ಮಾಡಿಕೊಡುತ್ತಿದ್ದ ಇವನು ಶ್ರೀ ರಂಗ ಪಟ್ಟಣ ಇತಿಹಾಸಕ್ಕೆ ಸಂಬಂದ ಪಡದ ಕ್ರಿಕೆಟ್ ಬಗ್ಗೆ ಬರೆಯಲು ಹೊರಟನಲ್ಲಾ ಅಂತಾ ಬೇಸರಿಸಬೇಡಿ, ಈ ಊರಿನ ಇತಿಹಾಸದ  ಅಂತರಾಳ  ವಿಚಿತ್ರ ಸ್ವಾಮೀ.ಹೌದು ಇಷ್ಟು ದಿನ ಇತಿಹಾಸದ  ಸ್ಮಾರಕ ಪರಿಚಯ ಮಾಡುತ್ತಿದ್ದ ನಾನು ಸ್ವಲ್ಪ ಬದಲಾವಣೆಗಾಗಿ ಈ ವಿಶೇಷ ಲೇಖನ ಬ್ಲಾಗ್ನಲ್ಲಿ  ಹಾಕುತ್ತಿದ್ದೇನೆ .ಕ್ರಿಕೆಟ್ ನಮಗೆಲ್ಲಾ ತಿಳಿದಂತೆ ಇಂದು ಭಾರತದ ಅನಧಿಕೃತ ರಾಷ್ಟ್ರೀಯ ಕ್ರೀಡೆಯಾಗಿ ಜನಪ್ರೀಯತೆ ಗಳಿಸಿದೆ.ಕ್ರಿಕೆಟ್ ಇಂದು ಭಾರತೀಯರ ಉಸಿರಾಗಿದೆ.ಆಟಗಾರರು ಇಂದು ಚಕ್ರವರ್ತಿಗಳಾಗಿದ್ದಾರೆ. ಆದರೆ ಈ ಕ್ರಿಕೆಟ್ಗೂ ನಮ್ಮ ದೇಶದಲ್ಲಿ ಒಂದು ಇತಿಹಾಸವಿದೆ . ಬ್ರಿಟೀಷ್ ಬಳುವಳಿಯಾದ ಈ ಕ್ರಿಕೆಟ್  ಮೊದಲು ಭಾರತಕ್ಕೆ  ಕಾಲಿಟ್ಟಿದ್ದು 1725  ರಲ್ಲಿ , ಬ್ರಿಟೀಷ್ ಮೂಲದ ಕೆಲವು ನಾವಿಕರು ಕ್ರಿಕೆಟ್ ಆಡಿದರೆಂದು ಕೆಲವು ದಾಖಲೆ ಹೇಳುತ್ತವೆ ಅಧಿಕೃತವಾಗಿ  ಈ ಭಾರತ ಖಂಡದ ಮೊದಲ ಕ್ರಿಕೆಟ್ ಕ್ಲಬ್  1792  ರಲ್ಲಿ ಕಲ್ಕತ್ತಾ ಕ್ರಿಕೆಟ್ ಹಾಗು ಫುಟ್ಬಾಲ್  ಸಂಸ್ಥೆ  ಎಂಬ ಹೆಸರಿನಿಂದ ಪ್ರಾರಂಭವಾಯಿತು . ಅದಾದನಂತರ  ದೇಶದ ಬಹಳಷ್ಟು ಕಡೆ ಬಾಂಬೆ, ದೆಹಲಿ, ಮದ್ರಾಸ್,ಸೇರಿದಂತೆ ಬ್ರಿಟೀಷ್ ಅದಿಪತ್ಯ  ಇದ್ದರೂ  ಎಲ್ಲೂ ಎರಡನೇ ಕ್ರಿಕೆಟ್ ಕ್ಲಬ್ ಪ್ರಾರಂಭವಾಗಲಿಲ್ಲ. ಆದರೆ ಶ್ರೀ ರಂಗ ಪಟ್ಟಣ ಅಂತಿಮ ಯುದ್ದ 1799 ರ ಮೇ  4 ರಂದು ಮುಗಿದ ನಂತರ ಬ್ರಿಟೀಷ್ ಅಧಿಕಾರಿಗಳು ಸೇರಿ ಭಾರತದ  ಎರಡನೇ ಕ್ರಿಕೆಟ್ ಕ್ಲಬ್ ಸ್ಥಾಪಿಸುತ್ತಾರೆ ಹಾಗಾಗಿ ಭಾರತ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಶ್ರೀ ರಂಗ ಪಟ್ಟಣವೂ  ವಿಶೇಷವಾಗಿ ತನ್ನ ಗೌರವ ಪಡೆದು ಮೆರೆದಿದೆ. ಮೇಲಿನ ಮಾಹಿತಿ ನಂಬಿಕೆ ಬರಲಿಲ್ಲವೇ .ಇಲ್ಲಿದೆ ನೋಡಿ ಪುರಾವೆ
ಇತಿಹಾಸದ ಕ್ರಿಕೆಟ್ ಆಟಗಾರ.
1]  [.[ಲಿಂಕ್ :-http://www.iloveindia.com/sports/cricket/history.html],Cricket, now termed as the unofficial national sport of India, has got an old history associated with its existence in the country. The oldest references to the sport in India can be dated as early as the year 1725 when some sailors played a friendly match at a seaport in Kutch. By the year 1792, the Calcutta Cricket and Football Club had been formed, and a yet another Cricket club had been formed at Seringapatam by the year 1799

2].[http://en.wikipedia.org/wiki/1799_English_cricket_season]
In the 1799 English cricket season, Surrey again beat All-England three times. As in the previous year, the number of matches declined due to the effect of the Napoleonic War.
A cricket club was formed at Seringapatam in south India after the successful British siege.

3][http://www.indianmirror.com/games/cricket/cricket-history.html]By the year 1792 the Calcutta cricket and football club had been formed and however another cricket club had been formed during 1799 at Seringapatam in South India. On 3rd march 1845 the Sepoy cricketers had played with the European cricketers in the place Sylhet located in (today’s Bangladesh).In 1848 The First Indian club was named as the Parsee Oriental cricket Club and the first match was held in Bombay (Mumbai).The first class cricket begin in the year 1864 where a match was held up between the madras and Calcutta team. The Bombay Presidency Matches was held in the year 1877.Later that was named the Bombay Triangular and then as Bombay Quadrangular.